ಸೇವಾಯಾನ ಸಂಸ್ಥೆಯಲ್ಲಿ ಶ್ರೀಮತಿ ವಿಜಯಲಕ್ಷ್ಮಿಯವರ ಗಾಯನ ಹಿರಿಯ ಮನಸ್ಸುಗಳಿಗೆ ಮುದ ನೀಡಿತು. ಮೈಮರೆತು ಕೇಳಿದ ಸಂಗೀತ ಹಿರಿಯರ ಕಣ್ಣಾಲಿಗಳನ್ನು ತುಂಬಿಸಿತು. ಸಂಗೀತ ಮಾನಸಿಕ ಶಾಂತಿಗೆ ಸಹಾಯ ಮಾಡುತ್ತದೆ ಎಂಬುದನ್ನು ಸೇವಾಯಾನ ಬಲವಾಗಿ ನಂಬಿದೆ, ಹೀಗಾಗಿಯೇ ಇಂತಹ ಕಾರ್ಯಕ್ರಮಗಳಿಗೆ ಬಹಳಷ್ಟು ಒತ್ತು ಕೊಡುತ್ತಾ ಬಂದಿದೆ. ವಿಜಯಲಕ್ಷ್ಮಿ ಮೇಡಂ ತಮ್ಮ ಜನ್ಮದಿನದ ಪ್ರಯುಕ್ತ ನಮಗೆ ಸಂಗೀತದ ರಸದೌತಣದ ಜೊತೆಗೆ ಸೀರೆಗಳನ್ನು, ವಿಶೇಷ ಊಟವನ್ನು ನೀಡಿದರು.
